ಖ್ಯಾತ ಸಿನಿಮಾ ನಟಿಗೆ 5 ವರ್ಷ ಜೈಲು ಶಿಕ್ಷೆ ಈಕೆ ಮಾಡಿರುವ ತಪ್ಪಾದರೂ ಏನು ಗೊತ್ತಾ

0
140

ಒಂದೊಂದು ದೇಶದ ಕಾನೂನು ಒಂದೊಂದು ರೀತಿ ಇರುತ್ತದೆ, ಈ ಕಾನೂನಿಗೆ ಕೆಲವೊಮ್ಮೆ ತಪ್ಪಲ್ಲದ ತಪ್ಪಗೆ ಕೆಲವರು ಬಲಿಯಾದರೆ ಚಿಕ್ಕ ಪುಟ್ಟ ತಪ್ಪುಗಳಿಗೂ ಶಿಕ್ಷೆ ಅನುಭವಿಸಿದ್ದಾರೆ. ಈ ರೀತಿಯ ವಿಚಿತ್ರಗಳಲ್ಲಿ ಈ ಪ್ರಕರಣ ಕೂಡ ಒಂದು. ಇವಳ ದೇಶದ ಕಾನೂನಿಗೆ ಬಲಿಯಾದ ಈ ನಟಿ ತನ್ನ ಅಮೂಲ್ಯವಾದ ವರ್ಷಗಳನ್ನು ಜೈಲಿನಲ್ಲಿ ಕಳೆಯುವ ಪರಿಸ್ಥಿತಿಗೆ ಬಂದಿದ್ದಾರೆ.

ಹೌದು ರಾನಿಯ ಯುಸುಫ್​ ಈಜಿಫ್ಟ್​ ದೇಶದ ಸಿನಿಮಾ ನಾಯಕಿ, ಈಕೆಯ ನಟನೆಗೆ ಆ ದೇಶದ ಲಕ್ಷಾಂತರ ಮಂದಿ ಅಭಿಮಾನಿಗಳು ಇಂದು ಕೂಡ ಇದ್ದಾರೆ. ಇತ್ತೀಚೆಗೆ ಕೈರೋ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಿತು. ಈ ಚಿತ್ರೋತ್ಸವದಲ್ಲಿ ಈ ನಟಿ ಆಕ್ಷೇಪಾರ್ಹ ಬಟ್ಟೆ ತೊಟ್ಟಿದ್ದಾಳೆ ಎನ್ನುವ ಕಾರಣವೇ ಇಂದು ಈಕೆಯ ಈ ಸ್ಥಿತಿಗೆ ಕಾರಣವಾಗಿ ಹೋಗಿದೆ. ಇಷ್ಟಕ್ಕೂ ಆಕೆ ಹಾಕಿಕೊಂಡಿದ್ದ ಹುಡುಗೆ ಆದರೂ ಎಂತಹುದು ಗೊತ್ತ,ಕೈರೋ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಮುಕ್ತಾಯ ಕಾರ್ಯಕ್ರಮದಲ್ಲಿ ರಾನಿಯ ಯುಸುಫ್​ ಪಾರದರ್ಶಕ ಹುಡುಗೆ ತೊಟ್ಟು ಮಿಂಚಿದ್ದರು.

ಸ್ವಿಮ್​ ಸೂಟ್​ ತರಹದ ಬಟ್ಟೆಯ ಮೇಲೆ ಇವರು ಬಲೆಯ ರೀತಿಯ ಮೇಲುಡುಗೆಯನ್ನು ತೊಟ್ಟು ಕಾರ್ಯಕ್ರಮದಲ್ಲಿ ಎಲ್ಲರ ಕಣ್ಣು ಕುಕ್ಕುವಂತೆ ಮಾಡಿದ್ದರು.ಕಾಲಿಗೆ ಕೂಡ ಪಾರದರ್ಶಕ ಬಟ್ಟೆಯನ್ನು ತೊಟ್ಟು ಅರೆಬೆತ್ತಲೆಯಾಗಿ ಮಿಂಚಿದ್ದರು, ಇದನ್ನು ಗಮನಿಸಿದ ಕೆಲವು ಧಾರ್ಮಿಕ ಮುಖಂಡರು ರಾನಿಯಾ ಅವರು ಅರೆಬೆತ್ತಲೆ ಬಟ್ಟೆ ತೊಡುವ ಮೂಲಕ ನಮ್ಮ ಸಂಸ್ಕೃತಿ ಮತ್ತು ಆಚಾರ ವಿಚಾರಗಳನ್ನು ಗಾಳಿಗೆ ತೂರಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು. ಈ ದೂರಿನ ಅನ್ವಯ ವಿಚಾರಣೆ ನಡೆಸಿದ ಈಜಿಫ್ಟ್​ ಕೋರ್ಟ್​ ಈ ನಟಿಗೆ ವರ್ಷಗಳ ಜೈಲು ಶಿಕ್ಷೆಯನ್ನು ನೀಡಿ ತೀರ್ಪು ನೀಡಿದೆ.ಸಿನಿಮಾದಲ್ಲಿ ಒಳ್ಳೆಯ ಭವಿಷ್ಯವನ್ನು ಕಾಣುತ್ತಿದ್ದ ರಾನಿಯ ಈಗ ಜೈಲು ಕಂಬಿ ಏಣಿಸುತ್ತಿದ್ದಾಳೆ, ಆದರೆ ಇದೇ ರೀತಿಯ ಪ್ರಕರಣ ಭಾರತದಲ್ಲಿ ಆಗಿದ್ದಿದ್ದರೆ ಏನೆಲ್ಲ ಆಗುತ್ತಿತ್ತು ಎನ್ನುವುದನ್ನು ಊಹಿಸಿಕೊಳ್ಳುವುದಕ್ಕೂ ಅಸಾದ್ಯ.

LEAVE A REPLY

Please enter your comment!
Please enter your name here