ಕೊನೆಗೂ ತಮ್ಮ ಬುದ್ದಿ ತೋರಿಸಿದ ಬಾಲಿವುಡ್ ಮಂದಿ…KGF ಸಿನಿಮಾ ವಿರುದ್ಧ ಮಾಡಿರುವ ಪಿತೂರಿ ಏನು ಗೊತ್ತೇ ನೋಡಿ ಇಲ್ಲಿ…

0
732

ಕೆಜಿಎಫ್ ಸದ್ಯ ದೇಶಾದ್ಯಂತ ಭಾರಿ ಸದ್ದು ಮಾಡುತ್ತಿರುವ ಕನ್ನಡದ ಸಿನಿಮಾ,ಕನ್ನಡಿಗರು ಮಾತ್ರವಲ್ಲದೆ ಇಡೀ ಭಾರತವೇ ಕೆಜಿಎಫ್ ಸಿನಿಮಾಕ್ಕಾಗಿ ಎದರು ನೋಡುತ್ತಿದ್ದಾರೆ.ಕರ್ನಾಟಕದ ಮಲ್ಟಿಪ್ಲೆಕ್ಸ್ ಗಳಲ್ಲಿ ಎಷ್ಟೋ ಸಲ ಕನ್ನಡದ ಸಿನಿಮಾಗಳನ್ನ ತೆಗೆದು ಬೇರೆ ಭಾಷೆಯ ಸಿನಿಮಾಗಳಿಗೆ ಅವಕಾಶ ಮಾಡಿಕೊಟ್ಟಿರುವ ಉದಾಹರಣೆಗಳು ಸಹ ಇದೆ.

ಇದೆ ಮೊದಲ ಬಾರಿಗೆ ಕನ್ನಡ ಸಿನೆಮಾವೊಂದು ಈ ಮಟ್ಟದ ಬೆಂಬಲವನ್ನ ಪಡೆದು ದಾಖಲೆ ನಿರ್ಮಿಸಲು ಮುಂದಾಗಿರುವುದಕ್ಕೆ ಸಹಿಸಿಕೊಳ್ಳಲಾಗದೆ ಪಿತೂರಿಯನ್ನ ಮಾಡುತ್ತಿರುವವರಿಗೆ ನಿಜವಾಗಲೂ ನಾಚಿಕೆಯಾಗಬೇಕು.ನೀವು ಕೂಡ ಕೆ.ಜಿ.ಎಫ್ ಸಿನಿಮಾವನ್ನ ಸಪೋರ್ಟ್ ಮಾಡುತ್ತೀರೆಂದರೆ ಇದನ್ನು ಓದಿರಿ…

ಇದೆ ಡಿಸೆಂಬರ್ 21 ರಂದು ದೇಶಾದ್ಯಂತ ತೆರೆ ಕಾಣಲು ಕೆ.ಜಿ.ಎಫ್ ಚಿತ್ರ ತಂಡ ಸಿದ್ದತೆಯನ್ನ ಮಾಡಿಕೊಂಡಿದೆ.ಸದ್ಯ ಏಳು ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆ ಹೊಂದಲಿದೆ.ಕನ್ನಡ ಸಿನಿಮಾವೊ೦ದು ಪ್ಯಾನ್ ಇಂಡೀಯಾ ಬಿಡುಗಡೆ ಆಗುತ್ತಿದೆ ಹಾಗೆಯೆ ಸಿನಿಮಾ ರಂಗದ ಅನೇಕರು ಸಿನಿಮಾದ ಎರಡು ಟ್ರೈಲರ್ ಗಳನ್ನ ಹೊಗಳಿದ್ದಾರೆ.

ನಮ್ಮ ಕನ್ನಡ ಸಿನಿಮಾ ನಮ್ಮ ಹಿಂದಿ ಸಿನಿಮಾದ ಮುಂದೆ ಬಂದು ಬಾರಿ ಕ್ರೇಜ್ ಹುಟ್ಟುಹಾಕಿದೆ ಎನ್ನುವ ಹೊಟ್ಟೆ ಕಿಚ್ಚಿನಿಂದ ಹಿಂದಿಯ ಕೆಲವು ಪ್ರಮುಖ ಮಾಧ್ಯಮಗಳು ಕೆ.ಜಿ.ಎಫ್ ಪ್ರಚಾರದಿಂದ ಹಿಂದೆ ಸರಿದಿವೆ.

ಹಿಂದಿ ಚಿತ್ರರಂಗದವರೇ ಕನ್ನಡಕ್ಕೆ ಸಪೋರ್ಟ್ ಮಾಡಬೇಡಿ ಎಂದು ಒತ್ತಡವನ್ನು ತಂದಿದ್ದಾರೆ.ಕೆ.ಜಿ.ಎಫ್ ಪ್ರಚಾರಕ್ಕೆ ಅವಕಾಶ ಮಾಡಿಕೊಟ್ಟಿಲ್ಲ.

ಕನ್ನಡದ ಹುಡುಗ ಯಶ್ ಪ್ರೀತಿ ಎಷ್ಟು ಇತ್ತು ಅಂದರೆ ಬಂದಿದ್ದಂಥ ಚಿಕ್ಕ ಪುಟ್ಟ ಮಾಧ್ಯಮಗಳಿಗೂ ಸಹ ಪ್ರೀತಿ ಇಂದ ಕಂಡು ಉತ್ತಮ ಪ್ರತಿಕ್ರಿಯೆಯನ್ನ ನೀಡಿ ಕೆ.ಜಿ.ಎಫ್ ಗೆಲ್ಲಿಸಿ ಎಂದು ಭಾರತೀಯರಲ್ಲಿ ಕೇಳಿಕೊಂಡಿದ್ದಾರೆ.

ಇನ್ನೊಂದು ಬೇಸರದ ವಿಷಯ ಎಂದರೆ ಮುಂಬೈ ಸೇರಿದಂತೆ ಹಿಂದಿ ಮಾತನಾಡುವ ಹಲವು ಪ್ರಾಂತ್ಯಗಳಲ್ಲಿ, ನಗರಗಳಲ್ಲಿ ಕೆ.ಜಿ.ಎಫ್ ಸಿನಿಮಾ ಪ್ರದರ್ಶನ ಮಾಡಲು ಥೀಯೇಟರ್ಗಳನ್ನೂ ನೀಡದಿರುವುದು.

ಇದೆ ದಿನ ಶಾರುಖಾನ್ ರವರ ಜೀರೋ ಸಿನಿಮಾ ಕೂಡ ತೆರೆ ಮೇಲೆ ಕಾಣುತ್ತಿದ್ದು,ಶಾರುಖಾನ್ ಸಿನಿಮಾದ ವಿರುದ್ಧ ಈ ಸಿನಿಮಾ ಗೆಲ್ಲಬಹುದು ಎಂಬ ಪಿತೂರಿಯಿಂದ ಮಲ್ಟಿಪ್ಲೆಕ್ಸ್ ಗಳು ಸೇರಿದಂತೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ಸಹ ಕೆ.ಜಿ.ಎಫ್ ಸಿನಿಮಾಗೆ ನೀಡುತ್ತಿಲ್ಲ ಎಂಬ ಸುದ್ದಿ ಬೇಸರಗೊಳಿಸಿದೆ.

ನಾವು ಕರ್ನಾಟಕ ರಾಜ್ಯದಲ್ಲಿ ಕನ್ನಡ ಸಿನಿಮಾಗಳಿಗೆ ಮಾತ್ರವಲ್ಲದೆ ಪರ ಭಾಷೆಯ ಸಿನಿಮಾಗಳಿಗೆ ಕೂಡ ಚಿತ್ರಮಂದಿರಗಳಲ್ಲಿ ಹಾಕಲು ಅವಕಾಶ ಮಾಡಿಕೊಟ್ಟು ಉದಾರತೆಯನ್ನ ಮೆರೆಯುತ್ತಾರೆ ಕನ್ನಡಿಗರು.

LEAVE A REPLY

Please enter your comment!
Please enter your name here