ಒಬ್ಬನೇ 2.75 ಲಕ್ಷ ರೂಪಾಯಿ ಕೊಟ್ಟು ‘ನಟಸಾರ್ವಭೌಮ’ ಟಿಕೇಟ್ ಖರೀದಿಸಿದ ಬೆಂಗಳೂರಿನ ಯುವಕ! ಯಾರು ಗೊತ್ತೇ ನೋಡಿ…

0
406

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ನಟಸಾರ್ವಭೌಮದ’ ಹವಾ ಜೋರಾಗೇ ಇದ್ದು ಇದೇ ಫೆಬ್ರವರಿ ಏಳರಂದು ಜಗತ್ತಿನಾದ್ಯಂತ ಬಿಡುಗಡೆ ಆಗುತ್ತಿದೆ.

‘ನಟಸಾರ್ವಭೌಮ’ ಚಿತ್ರವನ್ನು ‘ಗೂಗ್ಲಿ’ ಖ್ಯಾತಿಯ ಪವನ್ ಒಡೆಯರ್ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಪುನೀತ್ ರಾಜಕುಮಾರ್ ಒಂದು ಹೊಸ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಪುನೀತ್ ಅವರ ಹೇರ್ ಸ್ಟೈಲ್ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ.

ಪುನೀತ್ ರಾಜಕುಮಾರ್ ಓರ್ವ ಟ್ರೆಂಡ್ ಸೆಟ್ಟರ್ ನಟ. ಚಿತ್ರದಲ್ಲಿ ವಿಭಿನ್ನ ಗೆಟಪ್ ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ನಟಸಾರ್ವಭೌಮ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರು ಪತ್ರಕರ್ತನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಈ ಚಿತ್ರವನ್ನು ರಾಕ್ ಲೈನ್ ವೆಂಕಟೇಶ್ ನಿರ್ಮಿಸುತ್ತಿದ್ದು ಪುನೀತ್ ಗೆ ಜೋಡಿಯಾಗಿ ರಚಿತಾ ರಾಮ್,ಅನುಪಮಾ ಪರಮೆಶ್ವರನ್ ಅಭಿನಯಿಸಲಿದ್ದಾರೆ. ಚಿತ್ರಕ್ಕೆ ಡಿ ಇಮಾಮ್ ಸಂಗೀತ ಸಂಯೋಜಿಸುತ್ತಿದ್ದು, ವೈಧಿ ಅವರ ಛಾಯಾಗ್ರಹಣವಿದೆಯಂತೆ

ಸಾಮಾನ್ಯವಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಚಿತ್ರಕ್ಕಾಗಿ ಖುಷಿಯಿಂದ ಸಂಭ್ರಮಿಸುತ್ತಾರೆ,ಸಿಹಿ ಹಂಚುತ್ತಾರೆ,ಟಿಕೇಟ್ ಖರೀದಿಸುತ್ತಾರೆ ಆದರೆ ಇಲ್ಲೊಬ್ಬ ಅಭಿಮಾನಿ ಒಂದು ಹೆಜ್ಜೆ ಮುಂದೆ ಹೋಗಿದ್ದಾನೆ.

ಅಭಿ ಎಂಬ ಅಪ್ಪಟ ಅಪ್ಪು ಅಭಿಮಾನಿ ಒಬ್ಬ ಬರೊಬ್ಬರಿ 1200 ಟಿಕೇಟ್ ಗಳನ್ನು 2.75 ಲಕ್ಷ ರೂಪಾಯಿ ಕೊಟ್ಟು ಒಬ್ನನೇ ಖರೀದಿ ಮಾಡಿದ್ದಾನೆ.

ಹೌದು ಅಭಿ ಬೆಳಿಗ್ಗೆ 4ಗಂಟೆಯ ಆಟಕ್ಕೆ ಇಡೀ ಚಿತ್ರ ಮಂದಿರವನ್ನು ಬುಕ್ ಮಾಡಿದ್ದು ಬಿಡುಗಡೆ ದಿನ ಕುಟುಂಬ
ಮತ್ತು ಸ್ನೇಹಿತರನ್ನು ಚಿತ್ರಕ್ಕೆ ಕರೆದೊಯ್ಯುತ್ತಾರೆ.

LEAVE A REPLY

Please enter your comment!
Please enter your name here