ಅರ್ಜುನ್ ಸರ್ಜಾ ವಿರುಧ್ಧ ಮಿ-ಟು ಆರೋಪ ಮಾಡಿದ್ದಕ್ಕೆ ಶ್ರುತಿ ಸ್ಥಿತಿ ಏನ್ ಆಗಿದೆ ಗೊತ್ತಾ

0
466

ಶ್ರುತಿ ಹರಿಹರನ್ ಅವರು ನಟ ಅರ್ಜುನ್ ಸರ್ಜಾ ನನ್ನ ಮೇಲೆ ಅಸಭ್ಯವಾಗಿ ವರ್ತಿಸಿದ್ದಾರೆ, ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಮೀ-ಟು ಅಭಿಯಾನದ ಮೂಲಕ ಧ್ವನಿ ಎತ್ತಿದ್ದರು. ಈ ಅಭಿಯಾನದಲ್ಲಿ ಸಂಗೀತಾ ಭಟ್, ಸಂಜನಾ ಗ್ಯಾಲರಾಣಿ ಸೇರಿದಂತೆ ಅನೇಕ ನಟಿಯರು ಕೂಡ ತಮಗೆ ಆದ ಕೆಟ್ಟ ಅನುಭವಗಳನ್ನು ಹಂಚಿಕೊಂಡಿದ್ದರು.

ಆದ್ರೆ ಇವರಲ್ಲಿ ಹೆಚ್ಚು ಚರ್ಚೆಗೆ ಒಳಗಾಗಿದ್ದು ಶ್ರುತಿ ಹರಿಹರನ್ ಮಾತ್ರ. ಅದಕ್ಕೆ ಕಾರಣವೂ ಇತ್ತು. ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಮೂರೂ ದಶಕಗಳಿಗಿಂತಲೂ ಹೆಚ್ಚು ಕಾಲ ಸಕ್ರಿಯರಾಗಿರುವ ಅರ್ಜುನ್ ಸರ್ಜಾ ಮೇಲೆ ಶ್ರುತಿ ಹರಿಹರನ್ ಆರೋಪ ಮಾಡಿದ್ದರಿಂದ ಚಿತ್ರ ರಂಗದ ಬಹುಪಾಲು ಕಲಾವಿದರು ಅರ್ಜುನ್ ಸರ್ಜಾ ಪರವಾಗಿ ಧ್ವನಿ ಎತ್ತಿದ್ದರು, ಇದರಿಂದ ಶ್ರುತಿ ಹರಿಹರನ್ ಗೆ ಬೆಂಬಲವೇ ಇಲ್ಲದಂತಾಗಿತ್ತು. ಆ ಘಟನೆ ನಡೆದು ಒಂದು ತಿಂಗಳಗಳ ಮೇಲಾಗಿದೆ.

ಬಲವಾದ ಸಾಕ್ಷಿಗಳ ಕೊರತೆಯಿಂದ ಪ್ರಕರಣ ಇತ್ಯರ್ಥ ವಾಗದೆ ನಿಂತಲ್ಲೇ ನಿಂತಿದೆ. ಆದರೆ ಶ್ರುತಿ ಹರಿಹರನ್ ಮಾತ್ರ ಅದರ ಪರಿಣಾಮವನ್ನು ಎದುರಿಸುತ್ತಿದ್ದಾರೆ. ಈಗ ಶ್ರುತಿ ಹರಿಹರನ್ ಸ್ಥಿತಿ ಏನಾಗಿದೆ ಗೊತ್ತಾ ಮುಂಚೆ ಎಲ್ಲಾ ಶ್ರುತಿ ಹರಿಹರನ್ ಅವರಿಗೆ ವಾರಕ್ಕೆ ಕಡಿಮೆ ಎಂದರು ಮೂರರಿಂದ ನಾಲ್ಕು ಸಿನಿಮಾ ಆಫರ್ ಗಳು ಬರುತ್ತಿದ್ದವಂತೆ, ಆದರೆ ಈ ಘಟನೆಯ ನಂತರ ಒಂದು ತಿಂಗಳಿಗೆ ಎರಡೇ ಎರಡು ಸಿನಿಮಾ ಆಫರ್ ಗಳು ಬಂದಿದೆಯಂತೆ, ಇನ್ನೂ ಬೇಸರದ ಸಂಗತಿ ಎಂದರೆ ಈಕೆ ಒಪ್ಪಿಕೊಂಡಿದ್ದ ಎರಡು ಚಿತ್ರಗಳಿಂದ ಹೇಳದೆ ಕೇಳದೆ ತೆಗೆದು ಹಾಕಿದ್ದರಂತೆ. ಈ ವಿಷಯವನ್ನು ಸ್ವತಃ ಶ್ರುತಿ ಹರಿಹರನ್ ಅವರೇ ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here